ಜೀನಲ್ಲಿ ನಾಗಿಣಿಯ ಕಲ್ಯಾಣೋತ್ಸವ
Posted date: 16 Wed, Nov 2016 – 10:21:36 AM

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ  ನಾಗಿಣಿ ಆರಂಭವಾದಾಗಿನಿಂದಲೂ ದಿನದಿಂದ ದಿನಕ್ಕೆ ಹೆಚ್ಚಿನ ಪ್ರೇಕ್ಷಕರನ್ನು ತಲುಪುತ್ತಿದೆ. ಈ ನಾಗಿಣಿ ಧಾರಾವಾಹಿಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ನಿರ್ಧಾರ ಮಾಡಿರುವ ಜೀ ವಾಹಿನಿ, ನಾಗಿಣಿ ಕಲ್ಯಾಣೋತ್ಸವದ ವಿಶೇಷ ಸಂಚಿಕೆಗಳನ್ನು ಇದೇ ಸೋಮವಾರದಿಂದ ೩ ವಾರಗಳ ಕಾಲ ಪ್ರಸಾರ ಮಾಡಲಿದೆ. ಈವರೆಗೆ  ಮನುಷ್ಯನ ದುರಾಸೆ, ಅಹಂಕಾರ, ದೈವದೆಡೆಗಿನ ಆತನ ನಿರ್ಲP ಹಾಗೂ ಅದರಿಂದ ಆತ ಅನುಭವಿಸುವ ನೋವು, ನಿರಾಸೆಗಳನ್ನ ಹೇಳುವ ಪ್ರಯತ್ನವನ್ನ ಈ ಧಾರಾವಾಹಿಯ ಮೂಲಕ ಮಾಡಲಾಗಿದ್ದು,  ಮುಂದಿನ ಸಂಚಿಕೆಗಳಲ್ಲಿ ಹಾವೊಂದು ಕುಟುಂಬದ ಸೊಸೆಯಾಗಿ ಆ ಮನೆಗೆ ಹೋದಾಗ ನಡೆಯುವಂಥ ಘಟನೆಗಳನ್ನು ಕೌತುಕವಾಗಿ, ಮನರಂಜನಾತ್ಮಕವಾಗಿ ಜೀ ಕನ್ನಡ ತನ್ನ ವೀಕ್ಷಕರಿಗೆ ತೋರಿಸಲಿದೆ. ಮುಂದಿನ ಸಂಚಿಕೆಗಳು ಪ್ರೀತಿ ಮತ್ತು ಸೇಡಿನ ಕಥಾ ಹಂದರವನ್ನು ಹೊಂದಿದ್ದು ಅರ್ಜುನ್‌ನ ಪ್ರೀತಿ ಗೆಲ್ಲುತ್ತಾ ಅಥವಾ ನಾಗಿಣಿ ಅಮೃತಾಳ ಸೇಡು, ದ್ವೇಷ ಗೆಲ್ಲುತ್ತಾ ಎನ್ನುವುದರ ಮೇಲೆ ಕಥಾಹಂದರ ಹೆಣೆಯಲಾಗಿದೆ. ನಾಗಿಣಿ ಧಾರಾವಾಹಿಯ ಬಹುತೇಕ  ಕಲಾವಿದರು ಈ ಸಂಚಿಕೆಗಳಲ್ಲಿ ಭಾಗವಹಿಸಿದ್ದು ಮದುವೆಯ ಸಂಚಿಕೆಗಳು ವೈಭವಯುತಯಾಗಿ ಮೂಡಿಬರುವಲ್ಲಿ ಸಹಕರಿಸಿzರೆ. ಹಿಂದೂ ಸಂಪ್ರದಾಯದಲ್ಲಿ ನಡೆಯುವ ಮದುವೆಯ ಎ ವಿಧಿ ವಿಧಾನಗಳನ್ನು ಈ ಮದುವೆಯ ಸಂಚಿಕೆಗಳಲ್ಲಿ ಅಳವಡಿಸಲಾಗಿದ್ದು, ಪ್ರೇPಕರಿಗೆ ಈ ಸಂಚಿಕೆಗಳು ಒಂದು ಹೊಸ ಅನುಭವವನ್ನು ನೀಡಲಿವೆ. ಸಧ್ಯ  ಈ ಮದುವೆಗೆ ಕೆಲ ಅಡ್ಡಿ, ಆತಂಕಗಳು ಕೂಡ ಎದುರಾಗಿವೆ. ಹಸೆಮಣೆಯಲ್ಲಿ ಕೂರುವರು ಅಮೃತಾನಾ? ಮಯೂರಿನಾ ಎಂಬ ಪ್ರಶ್ನೆ ಈಗ ಎದುರಾಗಿದೆ. ಅರ್ಜುನ್ ಜೊತೆಗೆ ಹಸೆಮಣೆ ಏರೋದು ನಾನೇ  ಎಂದು  ಚಾಲೆಂಜ ಮಾಡಿ ಮನೆಯಿಂದ ಹೊರಬಂದಿರುವ ಮಯೂರಿ, ಈ ಮದುವೆಗೆ ತಂದಿಡುವ ಸಮಸ್ಯೆಗಳಾದರೂ ಏನು? ಮಂತ್ರವಾದಿ ಬೈರವ, ಅಮೃತಾಳ ಬಗ್ಗೆ ಅನುಮಾನಗೊಂಡು ಮದುವೆ ಮನೆಗೆ ಬಂದಾಗ ಆಗುವ ಘಟನೆಗಳೇನು? ಈ ಎಲ್ಲ ಪ್ರಶ್ನೆಗಳಿಗೂ ದಿ. ೨೧ರ ಸೋಮವಾರದಿಂದ ಆರಂಭವಾಗುವ  ಸಂಚಿಕೆಗಳಲ್ಲಿ ಉತ್ತರ ಸಿಗಲಿದೆ. ಮದುವೆ ಚಪ್ಪರದ ಶಾಸ್ತ್ರ, ಅರಿಶಿನಿ ಕುಂಕುಮ, ಕಾಶೀಯಾತ್ರೆ, ತಾಳಿ ಪೂಜೆ, ಅರುಂಧತಿ ನPತ್ರ, ಹೀಗೆ ಮದುವೆಯ ಎ ವಿಶೇಷ ಶಾಸ್ತ್ರಗಳನ್ನು ನಾಗಿಣಿಯ ವಿಶೇಷ ಸಂಚಿಕೆಗಳಲ್ಲಿ ಅಳವಡಿಸಲಾಗಿದೆ.
    ಮಾನವ ಸಹಜ ಸಂಬಂಧಗಳ ಸುಳಿಯಲ್ಲಿ ನಾಗಿಣಿ ಸಿಲುಕಿಕೊಳ್ಳುತ್ತಾಳಾ ಅಥವಾ ಇಡೀ ವಂಶ ವಿನಾಶದ ಉzಶದಿಂದ ಬಂದ ತನ್ನ ಉzಶವನ್ನು ಈಡೇರಿಸಿಕೊಳ್ಳುತ್ತಾಳಾ,  ನಾಗಮಣಿ ಅಥವ ತನ್ನ ಪತಿ ಅರ್ಜುನ್ ಈ ಎರಡರಲ್ಲಿ ನಾಗಿಣಿ ಯಾವುದನ್ನು ಆಯ್ದುಕೊಳ್ಳುತ್ತಾಳೆ ? ನಾಗಮಣಿಗೋಸ್ಕರ ನಾಗಿಣಿ ಅಮೃತ ಮಾಡುವ ತ್ಯಾಗಗಳೇನು? ಹಾವು ಮನುಷ್ಯ ಒಂದಾಗೋದಕ್ಕೆ ಸಾಧ್ಯಾವಾ?  ಎಂಬ ಎಲ್ಲಾ ಪ್ರಶ್ನೆಗಳಿಗೆ  ಉತ್ತರವನ್ನು ನೀಡುವಂಥ ಕಾಲ್ಪನಿಕ ಕಥೆಯನ್ನು ಕುತೂಹಲಕರವಾಗಿ, ಮತ್ತಷ್ಟು ಪರಿಣಾಮಕಾರಿಯಾಗಿ ಚಿತ್ರಿಸಲಿzವೆ  ಇದೊಂದು ಕಾಲ್ಪನಿಕ ಕಥೆಯಾಗಿದ್ದು, ಕಾಲ್ಪನಿಕ ಕಥೆಗೆ ಈಗಿನ ಕಾಲಘಟ್ಟದ ನೈಜ ದೃಶ್ಯಗಳನ್ನು ಹೆಣೆದು ಪ್ರೇPಕರ ಮುಂದಿಡಲಿzವೆ. ಯಾವುದೋ ಮೂಡನಂಬಿಕೆಗಳನ್ನು ಪ್ರೋತ್ಸಾಹಿಸದೆ, ಕೇವಲ ಮನರಂಜನೆಯ ದೃಷ್ಟಿಯಿಂದ ಮಾತ್ರ ಇಡೀ ಧಾರಾವಾಹಿಯನ್ನು ನಿರ್ಮಾಣ ಮಾಡಲಿzವೆ ಅನ್ನುವುದು ಜೀ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣುಸೂರು ಅವರ ಅಭಿಪ್ರಾಯವಾಗಿದೆ. ಸಿಂಧು ಹಾಗು ಹರೀಶ್‌ಬಾಬು ಅವರ ನಿರ್ಮಾಣವಿರುವ ಈ ಧಾರಾವಾಹಿಯ ನಿರ್ದೇಶನ ಹಯವದನ ಅವರzಗಿದ್ದರೆ, ನವಿಲುಗರಿ ಸೋಮು ಕಥೆ ಚಿತ್ರಕಥೆ ರಚಿಸಿದ್ದಾರೆ. ನಟರಾಜ ಮzಲ ಅವರ ಛಾಯಾಗ್ರಹಣವಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed